ಅವತಾರ್ ಕಿಶನ್ ಹಂಗಲ್’ ೧೯೧೭ ರಲ್ಲಿ ಪಂಜಾಬಿನ 'ಸಿಯಾಲ್ಕೋಟ್' ನಲ್ಲಿ ಜನಿಸಿದರು. ಹಿಂದಿ ಭಾಷೆಯ ಚಲನಚಿತ್ರ-ವಲಯದಲ್ಲಿ ಅವರನ್ನು ಎಲ್ಲರೂ 'ಎ.ಕೆ.ಹಂಗಲ್'ಎಂದೇ ಕರೆಯುತ್ತಾರೆ.

ಎ.ಕೆ.ಹಂಗಲ್
Born
ಅವತಾರ್ ಕಿಶನ್ ಹಂಗಲ್

(೧೯೧೭-೦೨-೦೧)೧ ಫೆಬ್ರವರಿ ೧೯೧೭
Died26 August 2012(2012-08-26) (aged 95)
Other namesಪದ್ಮ ಭೂಷಣ ಅವತಾರ್ ಕ್ರಿಷ್ಣ ಹಂಗಲ್
Occupationನಟ
Years active1965–2005
Notable workRam Shastri in Aaina
Inder Sen in Shaukeen
Imaam Sa'ab in Sholay

Bipinlal Pandey in Namak Haraam
Childrenವಿಜಯ್ ಹಂಗಲ್

ಎ.ಕೆ.ಹಂಗಲ್ ರವರ ತಂದೆ-ತಾಯಿಗಳು ಬದಲಾಯಿಸಿ

ಎ.ಕೆ.ಹಂಗಲ್ ರವರ ತಂದೆಯವರ ಹೆಸರು,ಪಂಡಿತ್ ಹರಿ ಕಿಶನ್ ಹಂಗಲ್ 'ಹಂಗಲ್' ರವರ ಬಾಲ್ಯವೆಲ್ಲಾ ಪೆಶಾವರ್ ನಲ್ಲೇ ಕಳೆಯಿತು. ತಮ್ಮ ಚಿಕ್ಕವಯಸ್ಸಿನಲ್ಲೇ ನಾಟಕಗಳಲ್ಲಿ ಕೆಲವು ದೊಡ್ಡ ಪಾತ್ರಗಳನ್ನು ಅಭಿನಯಿಸುತ್ತಾ ಬಂದರು. ಅವರು ಹೊಲಿಗೆಯನ್ನು ತಮ್ಮ ಒಂದು ಪ್ರಮುಖ ವೃತ್ತಿಯನ್ನಾಗಿ ಆರಿಸಿಕೊಂಡಿದ್ದರು. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರೂ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅವರ ತಂದೆಯವರ ಮರಣದ ಬಳಿಕ ಪರಿವಾರದ ಸದಸ್ಯರ ಜೊತೆಯಲ್ಲಿ 'ಪೆಶಾವರ್' ನಿಂದ 'ಕರಾಚಿ'ಗೆ ಬಂದರು. ೧೯೪೯ ರಲ್ಲಿ ದೇಶದ ಬಟವಾಡೆಯ ನಂತರ, ಕರಾಚಿಯ ಜೈಲಿನಲ್ಲಿ ೩ ವರ್ಷಕಳೆದ ಬಳಿಕ, ಅಲ್ಲಿಂದ ಭಾರತಕ್ಕೆ, ಬೊಂಬಾಯಿಗೆ ಬಂದರು. ನಾಟಕದ ಜೊತೆಗಾರರಾಗಿದ್ದ, ಬಲರಾಜ್ ಸಹಾನಿ, ಕೈಫಿ ಅಝ್ಮಿಯವರ ಸಹಿತ, ಅವರಿಬ್ಬರು ಮಾರ್ಕ್ಸ್ ವಾದಿಗಳು. 'IPTA ಗ್ರೂಪ್' ನಲ್ಲಿ ಸೇರಿಕೊಂಡರು.

ಹಿಂದಿ ಚಿತ್ರರಂಗದ ಪಾದಾರ್ಪಣೆ ಬದಲಾಯಿಸಿ

ಸನ್ ೧೯೬೬ ರಲ್ಲಿ, ಎ.ಕೆ.ಹಂಗಲ್, ತಮ್ಮ ಸಿನಿಮಾರಂಗದ ಜೀವನವನ್ನು ೫೦ ನೇ ವಯಸ್ಸಿನಲ್ಲಿ ’ಬಾಸು ಭಟ್ಟಾಚಾರ್ಯ’ ರವರ, ಹಿಂದಿ ಚಲನಚಿತ್ರ, 'ತೀಸ್ರಿ ಕಸಮ್' ನಿಂದ ಶುರುಮಾಡಿದರು. ಎ.ಕೆ.ಹಂಗಲ್ ಜೀವನದುದ್ದಕ್ಕೂ ಒಬ್ಬ ವೃದ್ಧನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದರು. ಅವರಿಗೆ ತೃಪ್ತಿತಂದ ಅಭಿನಯಗಳು 'ಶೋಲೆ'ಯಲ್ಲಿ ಮತ್ತು 'ಶೌಕೀನ್' ಚಿತ್ರದಲ್ಲಿ ನಟಿಸಿದ ಪಾತ್ರಗಳು. ಹಲವಾರು ಗುಡ್ಡಿ, ಚಿತ್‍ಚೋರ್ ಮುಂತಾದ ಚಿತ್ರಗಳಲ್ಲಿ ವಿವಿಧ ತರಹದ ಒಳ್ಳೆಯ ಹಿರಿಯ ವ್ಯಕ್ತಿಯ ಪಾತ್ರಗಳನ್ನು ನಿರ್ವಹಿಸಿದರು. ಒಟ್ಟಾರೆ ನಟಿಸಿದ ಚಿತ್ರಗಳು, ೧೨೫ ಕ್ಕೂ ಮಿಗಿಲು.

ಪ್ರಶಸ್ತಿಗಳು ಬದಲಾಯಿಸಿ

ಚಿತ್ರರಂಗದ ಇವರ ಸೇವೆಗಾಗಿ ಇವರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಮುಖ್ಯವಾಗಿ ೨೦೦೬ರಲ್ಲಿ ಇವರಿಗೆ ದೊರೆತ ಪದ್ಮ ಭೂಷಣ ಪ್ರಶಸ್ತಿ ಮುಖ್ಯವಾದುದು.

ನಿಧನ ಬದಲಾಯಿಸಿ

ಇವರು ಆಗಸ್ಟ್ ೨೬ ರಂದು ಬೆಳಗ್ಗೆ ೯ರ ಸುಮಾರಿಗೆ ಮುಂಬಯಿ ನ ಆಶಾ ಪರೇಖ್ ಆಸ್ಪತ್ರೆಯಲ್ಲಿ ತಮ್ಮ ೯೫ ರ ಹರೆಯದಲ್ಲಿ ನಿಧನರಾದರು.

ಬಾಹ್ಯ ಸಂಪರ್ಕಗಳು ಬದಲಾಯಿಸಿ