ಉಪಗ್ರಹ ವಾಹಕವೆಂದರೆ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡ್ಡಯಣ (ಹೊತ್ತಯ್ಯುವ) ವಾಹಕ ರಾಕೆಟ್ ಎಂದರ್ಥ. ಪ್ರಪಂಚದಲ್ಲಿ ಅಮೇರಿಕ, ರಷ್ಯಾ, ಫ್ರಾನ್ಸ್,ಚೀನಾ,ಜಪಾನ್ ಮತ್ತು ಭಾರತ ದೇಶಗಳು ಮಾತ್ರ ಉಪಗ್ರಹ ಉಡ್ಡಯಣ ವಾಹಕಗಳನ್ನು ಹೊಂದಿವೆ. ಇವುಗಳ ಸಾಮರ್ಥ್ಯ ಹೆಚ್ಚು-ಕಮ್ಮಿ ಯಿರುತ್ತವೆ. ಸಾಮರ್ಥ್ಯವೆಂದರೆ ಕೊಂಡೊಯ್ಯಬಲ್ಲ ಉಪಗ್ರಹದ ತೂಕ ಮತ್ತು ಕಕ್ಷೆ .ಸಾಮರ್ಥ್ಯದ ಆಧಾರದ ಮೇಲೆ ಉಡ್ಡಯಣ ವಾಹಕಗಳನ್ನು ವಿಂಗಡಿಸಬಹುದು. [೧]

ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34; ಉಪಗ್ರಹ ಉಡ್ಡಯನ ವಾಹನ

ಭಾರತದ ಉಡ್ಡಯಣ ವಾಹಕ ಗಳು ಬದಲಾಯಿಸಿ

  • ೧. ಎಸ್.ಎಲ್.ವಿ.(SLV-Satellite Lauch Vehicle)
  • ೨. ಎ.ಎಸ್.ಎಲ್.ವಿ.(ASLV-Augmented Satellite Launch Vehicle)
  • ೩. ಪಿ.ಎಸ್.ಎಲ್.ವಿ.(PSLV-Polar Satellite Launch Vehicle)
  • ೪. ಜಿ.ಎಸ್.ಎಲ್.ವಿ.(GSLV-Geosynchronous Satellite Launch Vehicle)
  • ೫. ಜಿ.ಎಸ್.ಎಲ್.ವಿ ಮಾರ್ಕ್-೩ (GSLV-Mark-3)
  • ಈಗ ಎಸ್.ಎಲ್.ವಿ., ಮತ್ತು ಎ.ಎಸ್.ಎಲ್.ವಿ., ಉಡ್ಡಯಣ ವಾಹಕಗಳು ಚಾಲ್ತಿಯಲ್ಲಿಲ್ಲ. ಇಸ್ರೋ ಸಂಸ್ಥೆಯು ಜಿ.ಎಸ್.ಎಲ್.ವಿ.- ಮಾರ್ಕ್-೩ ಉಡ್ಡಯಣ ವಾಹಕವನ್ನು ಇನ್ನೂ ಅಭಿವೃದ್ದಿಪಡಿಸುತ್ತಲಿದೆ.

ಇಂಧನ ಬದಲಾಯಿಸಿ

ಇಸ್ರೋ ಸಂಸ್ಥೆಯು ಅಭಿವೃದ್ದಿಪಡಿಸಿರುವ ಉಡ್ಡಯಣ ವಾಹಕಗಳಲ್ಲಿ ಘನ ಮತ್ತು ದ್ರವ ಇಂಧನಗಳನ್ನು ಬಳಸುವ ವಿವಿಧ ತಂತ್ರಜ್ಞಾನಗಳನ್ನೊಳಗೊಂಡಿವೆ. ತಾನು ಅಭಿವೃದ್ದಿಪಡಿಸಿರುವ ದ್ರವ ಇಂಧನ ಬಳಸುವ ಇಂಜಿನ್ಗೆ (ಯಂತ್ರಕ್ಕೆ) ವಿಕಾಸ್ ಇಂಜಿನ್ ಎಂದು ಹೆಸರಿಸಿದೆ. ಇದು UDMH/UH-25 ಇಂದನವನ್ನು ಮತ್ತು N2O4 (ಸಾರಜನಕದ ಟೆಟ್ರಾ ಆಕ್ಸ್ಯ್ ಡ್) ದಹಕ (ಆಮ್ಲಜನಕವನ್ನು ಹೊಂದಿರುವ ವಸ್ತು) ವನ್ನು ಉಪಯೋಗಿಸುತ್ತದೆ. ಈ ಎರಡೂ ಇಂಧನಗಳು ವಿಷಯುಕ್ತ ರಾಸಾಯನಿಕಗಳಾಗಿವೆ. ಇವುಗಳನ್ನು ಬಹಳ ಜಾಗರುಕತೆಯಿಂದ ಉಪಯೋಗಿಸಲಾಗುತ್ತದೆ.[೨]

ಪ್ರಪಂಚದಲ್ಲಿ ಚಾಲ್ತಿಯಲ್ಲಿರು ಪ್ರಮುಖ ರಾಕೇಟ್ ಗಳು ಬದಲಾಯಿಸಿ

ದೇಶ ರಾಕೇಟ್
ಪ್ರಾನ್ಸ್ ಏರಿಯನ್-೫
ಅಮೇರಿಕ ಡೆಲ್ಟಾ
ಚೀನಾ ಲಾಂಗ್ ಮಾರ್ಚ್
ರಷ್ಯಾ ಪ್ರೋಟಾನ್

[೩]

ನೋಡಿ ಬದಲಾಯಿಸಿ

ಉಲ್ಲೇಖ ಬದಲಾಯಿಸಿ

  1. Launch Vehicles
  2. TS Subramanian. "Silver jubilee of the first successful SLV-3". Frontiline. Archived from the original on 8 February 2018
  3. "Department of Space, Indian Space Research Organisation". Archived from the original on 2019-12-11. Retrieved 2019-12-29.