ಇಕ್ಷ್ವಾಕು ವಂಶ

ಇಕ್ಷ್ವಾಕು ಸಾಮ್ರಾಜ್ಯವೆಂದು ಸಹ ಕರೆಯಲ್ಪಡುತದೆ

ಇಕ್ಷ್ವಾಕು ವಂಶ ಭಾರತದ ಪೌರಾಣಿಕ ಹಾಗೂ ಐತಿಹಾಸಿಕ ವಂಶಗಳಲ್ಲಿ ಒಂದು. ಉತ್ತರಭಾರತದಿಂದ ದಕ್ಷಿಣದೇಶಕ್ಕೆ ಬಂದು ಇಲ್ಲಿ ರಾಜ್ಯಗಳನ್ನು ಕಟ್ಟಿದ ಕೇಕೆಯ,ಮತ್ತ್ಯ ಮುಂತಾದ ಅರಸುಮನೆತನಗಳಲ್ಲಿ ಇದೂ ಸೇರಿದೆ. ಮನುವಿನ ಮಗ ಇಕ್ಷ್ವಾಕು ಅಯೋಧ್ಯೆಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ರಾಜ್ಯ ಕಟ್ಟಿದ. ಇದರ ಉಲ್ಲೇಖ ಪುರಾಣಗಳಲ್ಲಿ ಮಾತ್ರವಲ್ಲದೆ, ಪಾಳಿ ಭಾಷೆಯ ಸಾಹಿತ್ಯದಲ್ಲಿ ಮತ್ತು ಜಾತಕ ಕಥೆಗಳಲ್ಲಿ ಕೂಡಾ ಬರುತ್ತದೆ.ಜೈನ ಧರ್ಮದಲ್ಲಿ ಕೂಡಾ ಈ ವಂಶದ ಪ್ರಸ್ತಾಪವಿದೆ.