ಅಸಿನ್ಯಾಫ್ತೀನ್[೧] ಬಿಳಿ ಬಣ್ಣದ ಸೂಜಿ ರೂಪದ ಹರಳಿನ ಅಸಿನ್ಯಾಫ್ತೀನ್ ಇಂಗಾಲದ ಒಂದು ಸಂಯುಕ್ತ. ಇದರ ರಾಸಾಯನಿಕ ಸಂಯೋಜನೆ C12H10 ಇದು ೯೫ ಸೆಂ.ಗ್ರೇ. ನಲ್ಲಿ ಕರಗುವುದು ಮತ್ತು ೨೭೮ ಸೆಂ. ಗ್ರೇ. ನಲ್ಲಿ ಕುದಿಯುವುದು. ಈ ಸಂಯುಕ್ತವನ್ನು ೨೬೦-೨೭೦ ಸೆಂ. ಗ್ರೇ.ನ ಅಂತರದಲ್ಲಿ ಕುದಿಯುವ ಕೋಲ್‍ಟಾರ್ ಎಣ್ಣೆಯಿಂದ ಎಂ.ಪಿ.ಇ ಬರ್ಥೆಲಾಟ್ ಎಂಬಾತ ಪ್ರತ್ಯೇಕಿಸಿದ. ಬಾರ್ಡೆ ಎಂಬ ಮತ್ತೊಬ್ಬ ವಿಜ್ಞಾನಿ α-β ಥೈಲ್ ನ್ಯಾಫ್ತ್‍ಲೀನ್ ಸಂಯುಕ್ತದಿಂದ ಅಸಿನ್ಯಾಫ್ತೀನ್ ಸಂಯುಕ್ತವನ್ನು ತಯಾರಿಸಿದ. ನ್ಯಾಫ್ತಲಿಕ್ ಅನ್‍ಹೈಡ್ರೈಡನ್ನು ಅಪಕರ್ಷಿಸಿ, ಡೈಬ್ರೋಮೈಡನ್ನಾಗಿ ಪರಿವರ್ತಿಸಿದ ಮೇಲೆ, ಈ ಡೈಬ್ರೊಮೈಡು ಫಿನೈಲ್ ಲೀಥಿಯಂನೊಡನೆ ವರ್ತಿಸಿದಾಗಲೂ ಅಸಿನ್ಯಾಫ್ತೀನ್ ಉತ್ಪತ್ತಿಯಾಗುವುದು.

ಅಸಿನ್ಯಾಫ್ತೀನ್‍ನ ಗುರುತಿಸುವ ರೀತಿ
      O
   OC    CO
                   HOH2C    CH2OH              Br H2C    CH2 Br                 
H2C    CH2
                   L1 A1 H4                              P Br3                          C6H5L1

ತಯಾರಿಸುವ ವಿಧಾನ ಬದಲಾಯಿಸಿ

 
ಕೋಲು ಮತ್ತು ಚೆಂಡಿನ ಮಾದರಿ
 
ಅಸಿನ್ಯಾಫ್ತೀನ್ ಪುಡಿ

ಪಿಕ್ರಿಕ್ ಆಮ್ಲದೊಡನೆ ನ್ಯಾಫ್ತಲೀನ್ ಸಂಕೀರ್ಣ(ಕಾಂಪ್ಲೆಕ್ಸ್) ಸಂಯುಕ್ತವನ್ನು ಕೊಡುವ ಹಾಗೆ ಅಸಿನ್ಯಾಫ್ತೀನ್ ಸಂಯುಕ್ತವೂ ಕೂಡ ಪಿಕ್ರಿಕ್ ಆಮ್ಲದೊಡನೆ, ೧೬೨ ಸೆಂ.ಗ್ರೇ.ನಲ್ಲಿ ಕರಗುವ ಕಿತ್ತಳೆ ಬಣ್ಣದ ಅಸಿನ್ಯಾಫ್ತೀನ್ ಸಂಯುಕ್ತವನ್ನು ಶುದ್ಧೀಕರಿಸುವುದರಲ್ಲಿಯೂ ಮತ್ತು ಗುರುತಿಸುವುದರಲ್ಲಿಯೂ ಈ ಪಿಕ್ರೇಟು ಬಹಳ ಉಪಯುಕ್ತವಾಗಿರುವುದು. ಬೇಗ ಸ್ಫಟೀಕೀಕರಿಸುವ ಗುಣವನ್ನೂ, ಹೆಚ್ಚಿನ ಕರಗುವಿಕೆಯ ಉಷ್ಣವನ್ನೂ ಮತ್ತು ಅತಿ ಕಡಿಮೆ ವಿಲೀನವಾಗುವ ಗುಣವನ್ನೂ ಈ ಪಿಕ್ರೇಟುಗಳು ಹೊಂದಿರುವ ಕಾರಣ, ಅಸಿನ್ಯಾಫ್ತೀನ್ ಪಿಕ್ರೇಟನ್ನು ಮಿಶ್ರಣಗಳಿಂದ ಬೇರ್ಪಡಿಸಲು ಅನುಕೂಲವಾಗಿರುವುದು. ಹೀಗೆ ಬೇರ್ಪಡಿಸಿ ಶುದ್ಧಗೊಳಿಸಿದ ಈ ಪಿಕ್ರೇಟಿನ ಈಥರ್ ದ್ರಾವಣಕ್ಕೆ ಅಮೋನಿಯಂ ಹೈಡ್ರಾಕ್ಸೈಡನ್ನು ಹಾಕಿದಾಗ ಅಸಿನ್ಯಾಫ್ತೀನ್ ಪುನರುತ್ಪತ್ತಿಯಾಗುವುದು.

ಉಪಯೋಗಗಳು ಬದಲಾಯಿಸಿ

ವ್ಯಾಟ್ ವರ್ಣದ್ರವ್ಯಗಳ ತಯಾರಿಕೆಯಲ್ಲಿ ಬೇಕಾಗುವ ಅಸಿನ್ಯಾಫ್ತಕ್ವಿನೋನ್ ಸಂಯುಕ್ತದ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುವರು.

ಉಲ್ಲೇಖ ಬದಲಾಯಿಸಿ

 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: