ಅವಿಧಾ

ಹಸಿವು ನಿವಾರಣೆ, ಶಿಕ್ಷ ಣ, ನೈಸರ್ಗಿಕ ವಿಕೋಪ ಮತ್ತಿತರೆ ಸಂದರ್ಭಗಳಲ್ಲಿ ಅವಿಧಾ ನೆರವಿನ ಹಸ್ತಚಾಚುತ್ತಿದೆ  ಅಲ್ಲ

ಅವಿಧಾ ಒಂದು ಸರ್ಕಾರೇತರ ಸಂಸ್ಥೆಯಾಗಿದೆ.ಬಡತನ ನಿರ್ಮೂಲನೆ ,ಲಿಂಗ ಅಸಮಾನತೆ ಆರೋಗ್ಯ, ಹಸಿವು ನಿವಾರಣೆ, ಶಿಕ್ಷ ಣ, ನೈಸರ್ಗಿಕ ವಿಕೋಪ ಮತ್ತಿತರೆ ಸಂದರ್ಭಗಳಲ್ಲಿ ಅವಿಧಾ ನೆರವಿನ ಹಸ್ತಚಾಚುತ್ತಿದೆ  ಅಲ್ಲದೇ ಸಮಾಜದ ಜನರ ನೋವು-ನಲಿವುಗಳಿಗೆ ಸ್ಪಂದಿಸಿ ಅವರ ಬದುಕಿನ ಕಷ್ಟ-ಪರಿಹರಿಸಿ ಅವರ ಬದುಕಿಗೆ ಭದ್ರತೆ ಒದಗಿಸುವಲ್ಲಿ ಅವಿರತ ಶ್ರಮಿಸುತ್ತ ಬಂದಿದೆ ಗ್ರಾಮೀಣ ಮಹಿಳೆಯರಿಗೆ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಅವಿಧಾ ಹಮ್ಮಿಕೊಳ್ಳುತ್ತಿದೆ..

ಅವಿಧಾ
ಅವಿಧಾ
ಮಾದರಿಸರ್ಕಾರೇತರ ಸಂಸ್ಥೆ
ಪ್ರಧಾನ ಕಚೇರಿಕಲಬುರ್ಗಿ
Founder(s)ವಿಠ್ಠಲ ರಾವ್
Presidentಪವನ್
ಜಾಲತಾಣhttps://www.avidhafoundation.com/

ಇತಿಹಾಸ ಬದಲಾಯಿಸಿ

ಅವಿಧಾ ೨೪ ನೆ ಜನೆವರಿ ೨೦೧೮ ರಲ್ಲಿ ಅಸ್ತಿತ್ವಕ್ಕೆ ಬಂದಿತು ಸಂಸ್ಥೆಯು ವಿಠ್ಠಲ ರಾವ್ ಅವರ ಮಾರ್ಗದರ್ಶನದಲ್ಲಿ ತನ್ನ ಅಭಿಯಾನವನ್ನು ಮುಂದುವರೆಸುತ್ತಾ ಬಂದಿದೆ.

ಸದಸ್ಯರು ಬದಲಾಯಿಸಿ

  • ಪ್ರಿಯಾಂಕಾ (ವೈದ್ಯಕೀಯ ವಿಭಾಗ)
  • ಅವಿನಾಶ (ಕಾರ್ಯದರ್ಶಿ)
  • ಆನಂದ್ (ಕಾರ್ಯದರ್ಶಿ)
  • ಉಮರ್ ಫಾರೂಕ್ (ಕಾರ್ಯದರ್ಶಿ)
  • ಪವನ್ (ಸಂಸ್ಥಾಪಕ)

ಹಮ್ಮಿಕೊಂಡ ಇತರ ಕಾರ್ಯಕ್ರಮಗಳು ಬದಲಾಯಿಸಿ

  • ವನ್ಯಜೀವಿಗಳನ್ನು ಮತ್ತು ಅವುಗಳ ಆವಾಸಸ್ಥಾನಗಳನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ವಿಶ್ವದಾದ್ಯಂತ ಜನರಿಗೆ ಅರಿವು ಮೂಡಿಸುವುದು ನಮ್ಮ ಉದ್ದೇಶ.
  • ಎಲ್ಲ ರೀತಿಯ ಶೋಷಣೆ ಮತ್ತು ತಾರತಮ್ಯ ಮುಕ್ತವಾದ ಜಗತ್ತನ್ನು ನಿರ್ಮಿಸುವುದು ನಮ್ಮ ಗುರಿ.
  • ಬಡತನ, ಅನಕ್ಷರತೆ, ರೋಗ ಮತ್ತು ಸಾಮಾಜಿಕ ಅನ್ಯಾಯದ ಸಂದರ್ಭಗಳಲ್ಲಿ ಜನರು ಮತ್ತು ಸಮುದಾಯಗಳಿಗೆ ಸಹಕಾರ ನೀಡುವುದು ನಮ್ಮ ಉದ್ದೇಶ.
  • ಆರ್ಥಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮಹಿಳೆಯರಿಗೆ ಮತ್ತು ಪುರುಷರಿಗೆ ತಮ್ಮ ಅಸ್ತಿತ್ವ ಹಾಗು ಸಮಾಜದ ಭದ್ರತೆ ಬಗ್ಗೆ ಅರಿವು ಮೂಡಿಸುವುದು.ಪ್ರತಿಯೊಂದು ಮಕ್ಕಳಿಗೆ ಪೌಷ್ಠಿಕ ಆಹಾರ
  • ಬಾಲ್ಯ ವಿವಾಹ ತಡೆಗಟ್ಟುವುದು
  • ವಿಧವಾ ಪುನರ್ವಿವಾಹ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುವುದು
  • ದೇವದಾಸಿ ಪದ್ಧತಿಯನ್ನು ತಡೆಯುವುದು
  • ಪರಿಸರ ರಕ್ಷಣೆ
  • ಬೀದಿ ನಾಟಕಗಳ ಮೂಲಕ ಪ್ರಚಲಿತ ಘಟನೆಗಳ ಬಗ್ಗೆ ಅರಿವು ಮೂಡಿಸುವುದು
  • ಬಾಲಕಾರ್ಮಿಕರನ್ನು ವಿದ್ಯಾವಂತರನ್ನಾನಿಸುವುದು
  • ಅಂಗವಿಕಲ ಮತ್ತು ಅಸಹಾಯಕರಿಗೆ ಆರ್ಥಿಕ ಭದ್ರತೆ ನೀಡುವುದು
  • ಬುದ್ಧಿಮಾಂದ್ಯ ಹಾಗೂ ಅಸಹಾಯಕರಿಗೆ ಉತ್ತಮ ಚಿಕಿತ್ಸೆ ನೀಡುವುದು
  • ಹಿಂದುಳಿದ ಪ್ರದೇಶ ಹಾಗೂ ಹಳ್ಳಿಗಳಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಶಿಬಿರ ಹಾಗೂ ಉತ್ತಮ ಶಿಕ್ಷಣ ವ್ಯವಸ್ಥೆಯನ್ನು ಕಲ್ಪಿಸುವುದು
  • ಯುವಕರಲ್ಲಿ ದೇಶ ಭಕ್ತಿಯ ಬಗ್ಗೆ ಅರಿವು ಮೂಡಿಸುವುದು ಮತ್ತು ಅವರಿಗೆ ಉತ್ತಮ ಉದ್ಯೋಗ ಅವಕಾಶಗಳಿಗೆ ಅನುವು ಮಾಡಿಕೊಡುವುದು
  • ಮಾದಕ ವ್ಯಸನಗಳಿಂದ ಮುಕ್ತಗೊಳಿಸುವುದು
  • ಯುವಕರಿಗೆ ದೌರ್ಜನ್ಯ ವಿರುದ್ಧ ಹೋರಾಡಲು ಸಹಕರಿಸುವುದು
  • ನಿರ್ಗತಿಕರಿಗೆ ಪುನರ್ವಸತಿ ನಿರ್ಮಿಸುವುದು.
  • ಹಸಿವು ಮುಕ್ತ ದೇಶಕ್ಕಾಗಿ ಹೋರಾಡುವುದು
  • ಮಹಿಳೆ ಹಾಗೂ ಮಕ್ಕಳ ಮೇಲಿನ ಅತ್ಯಾಚಾರ ತಡೆಗಟ್ಟುವುದು.
  • ವಯಸ್ಕ ಶಿಕ್ಷಣ ಬಗ್ಗೆ ಅರಿವು ಮೂಡಿಸುವುದು
"https://kn.wikipedia.org/w/index.php?title=ಅವಿಧಾ&oldid=1189236" ಇಂದ ಪಡೆಯಲ್ಪಟ್ಟಿದೆ