ಅಲ್ಫ ಕಣ(α)ಎಂದರೆ ಒಂದು ವಿಕಿರಣಶೀಲ ಮೂಲವಸ್ತುವು ವಿಕಿರಣ ಹೊಂದುತ್ತಿರುವಾಗ ಹೊರಹೊಮ್ಮಿಸುವ ಧನವಿದ್ಯುತ್ ಅಂಶವಿರುವ ಕಣ.ಈ ಕ್ರಿಯೆಗೆ ಅಲ್ಫ ಕ್ಷಯ (alpha decay)ಎಂದು ಹೆಸರು. ಅಲ್ಫ ಕಣವು ಹೀಲಿಯಮ್ಪರಮಾಣುವಿನಂತಿರುತ್ತದೆ.ಇದರಲ್ಲಿ ಎರಡು ಪ್ರೋಟಾನ್‌ಗಳು ಎರಡು ನ್ಯೂಟ್ರಾನ್‌ಗಳಿಗೆ ಬಲವಾಗಿ ಬೆಸೆದುಕೊಂಡಿರುತ್ತದೆ.ಆದುದರಿಂದ ಇದನ್ನು He2+ ಅಥವಾ 42He2+ ಎಂದು ಬರೆಯಬಹುದು.ಇದರ ದ್ರವ್ಯರಾಶಿ 6.644656×10-27 kg,ಆಗಿದ್ದು ಬೀಟ ಕಣಗಳಿಗಿಂತ ಸುಮಾರು ೭೦೦೦ ಪಟ್ಟು ಭಾರವಾಗಿರುತ್ತವೆ.ಒಂದು ಮೂಲವಸ್ತುವಿನಿಂದ ಅಲ್ಫ ಕಣಗಳು ಹೊರಹೊಮ್ಮಿದಾಗ ಅದರ ದ್ರವ್ಯರಾಶಿಯು 4.0015 u ರಷ್ಟು ಕಡಿಮೆಯಾಗಿ, ಅಂದರೆ ಅದರ ಎರಡು ಪ್ರೊಟಾನುಗಳು ಕಡಿಮೆಯಾಗುವುದರಿಂದ ಅದು ಹೊಸ ಪರಮಾಣುವಾಗಿ ಪರಿವರ್ತನೆ ಹೊಂದುತ್ತದೆ.ಉದಾಹರಣೆಗೆ ರೇಡಿಯಮ್ ಮೂಲವಸ್ತುವು ಅಲ್ಫ ಕ್ಷಯ(alpha decay)ಕ್ಕೆ ಒಳಪಟ್ಟಾಗ ರೇಡಾನ್ ಆಗಿ ಪರಿವರ್ತನೆ ಹೊಂದುತ್ತದೆ.ಗ್ರೀಕ್ ವರ್ಣಮಾಲೆಯ ಮೊದಲ ಅಕ್ಷರ "ಆಲ್ಫಾ" - α ನ ನಂತರ ಅಲ್ಫ ಕಣವನ್ನು ಹೆಸರಿಸಲಾಗಿದೆ.

ಅಲ್ಫ ಸವೆಯುವಿಕೆ
"https://kn.wikipedia.org/w/index.php?title=ಅಲ್ಫ_ಕಣ&oldid=719111" ಇಂದ ಪಡೆಯಲ್ಪಟ್ಟಿದೆ