ಅಂಬಾರ ಗದ್ದೆಯಲ್ಲಿ ನೆಲದ ಮೇಲೆ ಇರಿಸಲಾದ ಕತ್ತರಿಸಿದ ಧಾನ್ಯ ಕಣಿಕೆಗಳ ಪಟ್ಟಿಗಳ ಒಂದು ವೃತ್ತಾಕಾರದ ಅಥವಾ ಗೋಲಾಕಾರದ ಜೋಡಣೆ. ಸಾಮಾನ್ಯವಾಗಿ ಒಕ್ಕಣೆಗೆ ಸಿದ್ಧಮಾಡಲು ಗೋಧಿ, ಜವೆ ಮತ್ತು ತೋಕೆಗೋಧಿಯಂತಹ ಧಾನ್ಯಗಳ ಗುಚ್ಛಗಳನ್ನು ಅಂಬಾರ ಮಾಡಬಹುದು.

ಚೀನಾದ ಒಂದು ಗದ್ದೆಯಲ್ಲಿ ಅಂಬಾರ

ಈ ಅಭ್ಯಾಸಗಳ ಉದ್ದೇಶ ಎತ್ತಿಕೊಂಡು ದೀರ್ಘಕಾಲೀನ ಶೇಕರಣೆಗಾಗಿ ತರುವ ತನಕ ಒಕ್ಕಣೆ ಮಾಡದ ಧಾನ್ಯ, ಒಣಹುಲ್ಲು ಅಥವಾ ಮೇವನ್ನು ತೇವಾಂಶದಿಂದ ರಕ್ಷಿಸುವುದು. ಅಂಬಾರದಲ್ಲಿದ್ದಾಗ ಒಕ್ಕಣೆ ಮಾಡದ ಧಾನ್ಯ ಕೆಡದಂತೆ ಇರುತ್ತದೆ.

ಹುಲ್ಲಿನ ಆರು, ಹತ್ತು ಅಥವಾ ಹದಿನೈದು ಕಟ್ಟುಗಳನ್ನು ಗದ್ದೆಯಲ್ಲಿ ಒಂದುಗೂಡಿಸಲಾಗುತ್ತಿತ್ತು. ಈಗ ಇದಕ್ಕೆ ಅಂಬಾರ ಯಂತ್ರವನ್ನು ಬಳಸಲಾಗುತ್ತದೆ. ಅಂಬಾರದ ಬಂಡಿ ಕಟ್ಟುಗಳನ್ನು ಹಿಡಿದಿಟ್ಟುಕೊಳ್ಳಲು ನಾಲ್ಕರಿಂದ ಆರು ಬೆರಳುಗಳನ್ನು ಹೊಂದಿರುತ್ತದೆ.

ಯಾಂತ್ರಿಕ ಕಟಾವು ರೂಢಿಯಲ್ಲಿ ಬರುವವರೆಗೆ, ಕೈಯಾರೆ ಧಾನ್ಯಗಳ ಗುಚ್ಛವನ್ನು ಕತ್ತರಿಸಿ, ಕಟ್ಟುಗಳಾಗಿ ಕಟ್ಟಿ, ಅವುಗಳನ್ನು ಒಂದರ ವಿರುದ್ಧ ಮತ್ತೊಂದನ್ನು ಲಂಬವಾಗಿ ಮೆದೆಹಾಕಿ, ಗಾಳಿಯಲ್ಲಿ ಒಣಗಲು ಅಂಬಾರ ರೂಪಿಸುವುದು ಒಂದು ಸಾಮಾನ್ಯ ಕೃಷಿ ಪದ್ಧತಿಯಾಗಿತ್ತು.[೧]

ಉಲ್ಲೇಖಗಳು ಬದಲಾಯಿಸಿ

"https://kn.wikipedia.org/w/index.php?title=ಅಂಬಾರ&oldid=739281" ಇಂದ ಪಡೆಯಲ್ಪಟ್ಟಿದೆ